'ದಿ ವಿಲನ್' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಟಾಕೀ ಪೋಷನ್ ಮುಗಿಸಿದ್ದ ನಿರ್ದೇಶಕ ಪ್ರೇಮ್, ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭಾಗದ ಚಿತ್ರೀಕರಣ ಮಾಡುತ್ತಿದ್ದಾರೆ. ಈ ಹಿಂದೆ ಹೇಳಿದ್ದಾಗೆ ಶಿವರಾಜ್ ಕುಮಾರ್ ಅವರ ಎಂಟ್ರಿ ಹಾಡಿನಲ್ಲಿ 6 ಜನ ನಟಿಯರು ಹೆಜ್ಜೆ ಹಾಕಲಿದ್ದಾರೆ. ಡಿಂಪಲ್ ಕ್ವೀನ್ ರಚಿತಾ ರಾಮ್, ರಂಗಿತ ರಂಗ ಖ್ಯಾತಿಯ ರಾಧಿಕಾ ಚೇತನ್ ಹಾಗೂ ಯು-ಟರ್ನ್ ಖ್ಯಾತಿಯ ಶ್ರದ್ಧಾ ಶ್ರೀನಾಥ್ 'ದಿ ವಿಲನ್' ಅಡ್ಡಾದಲ್ಲಿ ಸೊಂಟ ಬಳುಕಿಸಲಿದ್ದಾರೆ ಎನ್ನುವ ಮಾಹಿತಿ ಸಿಕ್ಕಿತ್ತು. ಈಗ ಈ ಮೂವರ ಜೊತೆಯಲ್ಲಿ ಇನ್ನು ಮೂರು ಜನ ಯಾರು ಎಂಬುದು ರಿವಿಲ್ ಆಗಿದೆ.
Along with Shraddha srinath, Rachita ram and Radhika chetan the three other heroines to shake leg with Shivarajkumar in The Villain will be Bhavana Rao, Shanvi srivastava and samyukta hornad.